resource persons
Profile of the Academy’s mentors / beneficiaries and resource persons
resource persons
ಅಕಾಡೆಮಿಯ ಮಾರ್ಗದರ್ಶಕರು / ಹಿತೈಷಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ವಿವರ

Shree Chandrakanth V.
MA - Sociology ಮಂಗಳೂರು ವಿಶ್ವವಿದ್ಯಾಲಯಸಮಾಜ ಶಾಸ್ತ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಕೊಣಾಜೆ ಮಂಗಳೂರು ಇಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ನರೇನ್ ಅಕಾಡೆಮಿಯ ಸ್ಥಾಪಕರು, ಸದರಿ ಸಂಸ್ಥೆಯ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದಲ್ಲಿ ೨೮.೫ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದು, (ಕ್ಲಾಸ್ II ಆಫಿಸರ್) ನಿವೃತ್ತಿ ನಂತರ ೨೦೧೭ರಲ್ಲಿ ಸಂಸ್ಥೆ ಸ್ಥಾಪಿಸಿ ಕಳೆದ ಮೂರು ವರ್ಷಗಳಿಂದ ಜನರಲ್ ಸ್ಟಡಿ ಸಂಬAಧಿಸಿದ Governance, Polity ವಿಷಯದ ಕುರಿತು ತರಬೇತಿ ನೀಡುತ್ತಿದ್ದಾರೆ.

Dr || Y. Ravindranath Rao
Sociologistಪಿ.ಎಚ್.ಡಿ. ಮಂಗಳೂರು ವಿಶ್ವವಿದ್ಯಾಲಯಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿರುವ ಎಸ್.ಎಮ್.ಎಸ್. ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನ ಪ್ರಿನ್ಸಿಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿ ನಂತರ NKCMANGALORE, HKCAC-KALBURGI, SISSONEW DELHI ಈ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೌತ್ ಆಫ್ರಿಕಾ, ಜಪಾನ್, ಸ್ವೀಡನ್ ಸೇರಿದಂತೆ ವಿವಿಧ ದೇಶಗಳಲ್ಲಿ ಸಮಾಜಶಾಸ್ತ ವಿಷಯದ ಸೆಮಿನಾರುಗಳಲ್ಲಿ ಭಾಗವಹಿಸಿದ್ದಾರೆ. ಇವರು ಪ್ರಸ್ತುತ ನಮ್ಮ ಸಂಸ್ಥೆಯಲಿ GS IV-Ethics ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಮಾರ್ಗದರ್ಶಕರಾಗಿ ಸಲಹೆ ಸೂಚನೆ ನೀಡುತ್ತಿದ್ದಾರೆ.

Shree Sakaram Somayaji
ಸಕಾರಾಮ ಸೋಮಯಾಜಿ ಅವರು ಜವಾಹರ್ಲಾಲ್ ನೆಹರು ಯುನಿವರ್ಸಿಟಿ ದಿಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆಶ್ರೀಯುತರು ನಿವೃತ್ತಿ ನಂತರ ವಿವಿಧ ಸೇವಾ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ನರೇನ್ ಅಕಾಡೆಮಿಯಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ತರಬೇತಿ ಕೊಡ ಮಾಡುವ ಮೂಲಕ ತಮ್ಮ ಕೊಡುಗೆ ನೀಡಿದ್ದಾರೆ

Shree B.N. Shankara Poojari
ಶ್ರೀ ಬಿ.ಎನ್. ಶಂಕರ ಪೂಜಾರಿ ಉದ್ಯಮಿ (ಡೆವೆಲಪ್ರ‍್ಸ್) ಬ್ರಹ್ಮಾವರ, ಉಡುಪಿ ಜಿಲ್ಲೆ. ಮಾಜಿ ಅಧ್ಯಕ್ಷರು, ಉಡುಪಿ ಜಿಲ್ಲಾ ಪಂಚಾಯತ್ಶ್ರೀಯುತರು ಯಶಸ್ವಿ ಉದ್ಯಮಿಯಾಗಿ (ಡೆವಲಪ್ಪರ್) ತಮ್ಮ ಸಂಸ್ಥೆ ಮುನ್ನಡೆಸುತ್ತಿದ್ದಾರೆ. ಇವರು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿ ಜಿಲ್ಲೆಯ ಗ್ರಾಮೀಣ ಭಾಗದ ಅಭಿವೃದ್ಧಿಗೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಪ್ರಸ್ತುತ ಕಟಪಾಡಿ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಯುತರು ನರೆನ್ ಅಕಾಡೆಮಿ ಸಂಸ್ಥೆಯ ಹಿತೈಷಿಗಳಾಗಿ ಸಲಹೆ ಸೂಚನೆ ಕೊಟ್ಟು ಮುನ್ನಡೆಸುತ್ತಿದ್ದಾರೆ

Shree Vivek Kamat
B-TECH-CSE/MBA (IGNOU)ಕಳೆದ ೨೩ ವರ್ಷಗಳಿಂದ ಗಣಿತಶಾಸ್ತ/ತರ್ಕ ಶಾಸ್ತದ ಕುರಿತು ಹಲವಾರು ಸಂಸ್ಥೆಗಳಿಗೆ ಭೇಟಿ ನೀಡಿ ತರಬೇತಿ ಕೊಡುತ್ತಿದ್ದಾರೆ. ಅಲ್ಲದೇ ಇವರನ್ನು ಬ್ರಹ್ಮಾವರ ಗಣಿತಶಾಸ್ತಜ್ಞ ಎಂದೇ ಗುರುತಿಸಲಾಗುತ್ತದೆ. ಇವರು ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಗಣಿತಶಾಸ್ತ ತರ್ಕಶಾಸ್ತದ ತರಬೇತಿ ನೀಡುತ್ತಿದ್ದಾರೆ.

Shree Mahesh P.G.
M.Com ಮಂಗಳೂರು ವಿಶ್ವವಿದ್ಯಾಲಯ ಎಮ್.ಫಿಲ್ ಕನ್ನಡ ವಿಶ್ವವಿದ್ಯಾಲಯ ಹಂಪಿ ಪಿ.ಎಚ್.ಡಿ. ಕನ್ನಡ ವಿಶ್ವವಿದ್ಯಾಲಯ ಹಂಪಿಎಂ.ಕಾA. ಸ್ನಾತಕೋತ್ತರ ಪದವಿ ನಂತರ ಎಮ್.ಫಿಲ್. ಅನ್ನು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪೂರೈಸಿ ಮಂಗಳೂರಿನ ಖಾಸಗಿ ಸಂಸ್ಥೆಯಲಿ (MBA) ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಬೋಧನೆಯಲ್ಲಿ ಅನುಭವಿಗಳು. ಇವರು ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ (ಪಿ.ಎಚ್.ಡಿ.) ಪೂರೈಸುವ ಹಂತದಲ್ಲಿದ್ದಾರೆ. ನಮ್ಮ ಸಂಸ್ಥೆಯಲ್ಲಿ GS-III ಗೆ ಸಂಬAಧಿಸಿದ ವಿಶ್ವ ಬ್ಯಾಂಕ್/ಐ.ಎಮ್.ಎಫ್./ಆರ್.ಬಿ.ಐ. ಇತ್ಯಾದಿ ವಿಷಯಗಳ ಕುರಿತು, ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Shreemathi Divya S. Poojari
MA-HISTORY ಮಂಗಳೂರು ವಿಶ್ವವಿದ್ಯಾಲಯಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಪ್ರಥಮ ದರ್ಜೆ ಪದವಿ ಕಾಲೇಜು ತೆಂಕನಿಡಿಯೂರು ಇಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೩ ವರ್ಷಗಳ ಅನುಭವವಿದೆ. ನಮ್ಮ ಸಂಸ್ಥೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ಇತಿಹಾಸ ವಿಷಯದ ಕುರಿತು ತರಬೇತಿ ನೀಡುತ್ತಿದ್ದಾರೆ.

Namrata Rao
B-Tech-CSE ಇವರು ಬೋಧನೆಯಲ್ಲಿ ೬ ವರ್ಷಗಳ ಅನುಭವ ಹೊಂದಿದ್ದು, ನಮ್ಮ ಸಂಸ್ಥೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ಸೈನ್ಸ್ ಹಾಗೂ ಟೆಕ್ನೋಲಜಿ ವಿಷಯದ ಕುರಿತು ತರಬೇತಿ ನೀಡುತ್ತಿದ್ದಾರೆ.

Akshaya Nayak
MA economics ಮಂಗಳೂರು ವಿಶ್ವವಿದ್ಯಾಲಯ8 ವರ್ಷ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಅನುಭವ ಹೊಂದಿದ್ದಾರೆ. ಪ್ರಸ್ತುತ ನರೇನ್ ಅಕಾಡೆಮಿಯಲ್ಲಿ GS III ಸಂಬಂಧಿಸಿದ economic development ಬಗ್ಗೆ ತರಬೇತಿ ನೀಡುತ್ತಿದ್ದಾರೆ.

Shreemathi Bhavya H. Rai
MA KANNADA ಮಂಗಳೂರು ವಿಶ್ವವಿದ್ಯಾಲಯಇವರಿಗೆ ೯ ವರ್ಷಗಳ ಬೋಧನಾ ಅನುಭವವಿದ್ದು, ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ಸ್ಪರ್ಧಾತ್ಮ ಕಪರೀಕ್ಷಾರ್ಥಿಗಳಿಗೆ ಕನ್ನಡ ಭಾಷಾಜ್ಞಾನ ಕುರಿತು ತರಬೇತಿ ನೀಡುತ್ತಿದ್ದಾರೆ.

Shree Vinith Shetty
MA-SOCIOLOGY ಮಂಗಳೂರು ವಿಶ್ವವಿದ್ಯಾಲಯಪದವಿ ನಂತರ, ಸಂಯುಕ್ತ ಕರ್ನಾಟಕ ದಿನಪತ್ರಿಕೆ ಮಂಗಳೂರು ಶಾಖೆಯ ಕಛೇರಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ಜನರಲ್ ಸ್ಟಡಿ-III ಸಂಬAಧಿಸಿದ DISASTER MANAGEMENT AND OTHER SUBJECTS ಕುರಿತು ತರಬೇತಿ ನೀಡುತ್ತಿದ್ದಾರೆ.

Shree Chetan Hegde
ಕಂಪ್ಯೂಟರ್ ಸೈನ್ಸ್ ಪದವೀಧರರುಇವರು ಕಂಪ್ಯೂಟರ್ ಸೈನ್ಸ್ ಪದವಿ ಪಡೆದ ನಂತರ ಸ್ವಂತದ ಉದ್ಯಮ (Web Designing) ಪ್ರಾರಂಭಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸಂಸ್ಥೆಯ ಹಿತೈಷಿಗಳು ಹಾಗೂ ಡಿಜಿಟಲ್ ತಾಂತ್ರಿಕ ಮಾರ್ಗದರ್ಶಕರು ಮತ್ತು ಸಂಸ್ಥೆಯು ಭವಿಷ್ಯದಲ್ಲಿ ಪ್ರಾರಂಭಿಸಲಿರುವ ವೆಬ್ ಡಿಸೈನಿಂಗ್ ತರಬೇತಿ ಉಸ್ತುವಾರಿಯನ್ನು ನಿರ್ವಹಿಸಲಿದ್ದಾರೆ. ಅಲ್ಲದೇ ಸೈನ್ಸ್ ಹಾಗೂ ಟೆಕ್ನೋಲಜಿ ಕುರಿತು ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ತರಬೇತಿ ನೀಡುತ್ತಾರೆ.

Shree Abhilash V
MBA-HR MARKETING CMS ಜೈನ್ ಯುನಿವರ್ಸಿಟಿ ಬೆಂಗಳೂರು BHRDಆಳ್ವಾಸ್ ಕಾಲೇಜು ಮೂಡುಬಿದ್ರೆ, ದ. ಕ. ಜಿಲ್ಲೆ ಅಮೇರಿಕಾ ಮೂಲದ (USA) ಅಲ್ಲೆಗಿಸ್ ಗ್ರೂಪ್ಸ್ನ ಬೆಂಗಳೂರು ಶಾಖೆಯಲ್ಲಿ ಟೆಕ್ನಿಕಲ್ ರಿಕ್ರೂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನರೇನ್ ಅಕಾಡೆಮಿಯಲ್ಲಿ ಸಾಮಾಜಿಕ ಹೊಣೆಗಾರಿಕೆ (Social Responsibility) ನೆಲೆಯಲ್ಲಿ ವೀಕೆಂಡ್ ಬಿಡುವಿನ ಸಮಯದಲ್ಲಿ ಪ್ರಸ್ತುತ ಬೇಡಿಕೆ ಇರುವ, ಉದ್ಯೋಗದ ಮಾಹಿತಿ ಹಾಗೂ HR ಕುರಿತು ತರಬೇತಿ ನೀಡುತ್ತಾರೆ.

Gaurav Shetty
Msc-Electronic Media Banglore Universityಇವರು ಬೆಂಗಳೂರು ವಿಶ್ವ ವಿದ್ಯಾನಿಲಯ ದಲ್ಲಿ Msc-Electronic Media ದಲ್ಲಿ ಸ್ನಾತಕೋತ್ತರ ಪದ್ದವಿ ಪಡೆದ್ದ ನಂತರ TV ಚಾನೆಲ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಹಾಯಕ ನಿರ್ದೆಶಕರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಆಲ್ಲದೆ ಎಡಿಟಿಂಗ್ ವಿಭಾಗಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ 5 ವರ್ಷದ ಅನುಭವವಿದೆ. ಪ್ರಸ್ತುತ ಇವರು byjus ಸಂಸ್ಥೆಯಲ್ಲಿ ಆಯೇಟಿವ್ ಅಸೋಸಿಯೆಟ್' ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನರೇನ್ ಆಕಾಡೆಮಿ ಬ್ರಹ್ಮಾವರ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಲ್ಲಿ ಕಾರ್ಯ ನಿರ್ವಹಿಗ್ಗುತ್ತಿದ್ದನ್ನು ಮನಗಂಡು ವಾರಾಂತ್ಯದ ಬಿಡುವಿನಲ್ಲಿ ಸಂಸ್ಥೆಯ ತಾಂತ್ರಿಕ ವಿಭಾಗದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

GURUMURTY K.K
M.A HISTORY AND DIPLOMA EPIGRAPHY University of Mysoreಶ್ರೀ ಗುರುಮೂರ್ತಿ ಕೆ.ಕೆ ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪಡೆದವರು. ಉಡುಪಿ ಜಿಲ್ಲೆ ಬ್ರಹ್ಮಾವರ ಸ್ಥಾಲೂಕಿನ ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಪ್ರೊಫೆಸರ್ ಹಾಗೂ ಇತಿಹಾಸ್ತ್ರ ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಇತ್ತೀಚಿಗೆ ನಿವೃತ್ತಿ ಹೊಂದಿದ್ದಾರೆ. ಇವರ ಅಪಾರ ಶಿಷ್ಯ ವೃಂದ ಉನ್ನತ ಹುದ್ದೆಗಳನ್ನು ಪಡೆದು ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಇತಿಹಾಸಕ್ಕೆ ಸಂಬಂಧಪಟ್ಟ ಸಂಶೋಧನೆ ಲೇಖನಗಳನ್ನು ಪ್ರಕಟಿಸಿದ್ದಾರೆ. ನರೇನ್ ಅಕಾಡೆಮಿಯು ಸಾಮಾಜಿಕ ಹೊಣೆಗಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನ್ನು ಮನಗಂಡು ಆಧುನಿಕ ಇತಿಹಾಸ ಕುರಿತು ವಿಡೀಯೋ ಸರಣಿಯಲ್ಲಿ ತಮ್ಮ ಅಪಾರ ಭಾಗವನ್ನು ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿದ್ದಾರೆ

Amrutha Adiga
Msc-Mathemetics Manglore University ಶ್ರೀಮತಿ ಅಮೃತ ಅಡಿಗ ಇವರು ಮಂಗಳೂರು ವಿಶ್ವವಿದ್ಯಾಲಯ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ ವಿಜಯ ಕಾಲೇಜಿನ ಪದವೀಧರ ವಿದ್ಯಾರ್ಥಿಗಳಿಗೆ ಹಾಗೂ ಇತರ ಸಂಸ್ಥೆಗಳಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ನರೇನ್ ಅಕಾಡೆಮಿ ಬ್ರಹ್ಮಾವರದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಜಿಯೋಗ್ರಾಫಿ ಕುರಿತು ಆನ್ಲೈನ್ ಕ್ಲಾಸ್ ಗಳಿಗೆ ವಿಡಿಯೋ ಸರಣಿ ಮುಖಾಂತರ ಪಾಠ ಮಾಡುತ್ತಿದ್ದಾರೆ. ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು ಮನಗಂಡು ತಮ್ಮ ಕೊಡುಗೆ ಸಲ್ಲಿಸುತ್ತಿದ್ದಾರೆ.
head of design
ನರೇನ್ ಅಕಾಡೆಮಿ, ಈ ಸಂಸ್ಥೆಯು ಸೋಶಿಯಲ್ ಎಂಟರ್ಪ್ರೈಸಸ್ ತತ್ವದಡಿ ಸಂಘಟಿತವಾಗಿದೆ. ಬ್ರಹ್ಮಾವರದ ಸಮಾನಮನಸ್ಕ ನಾಗರಿಕ ಬಂಧುಗಳ ಸಹಕಾರದಿಂದ ಸಾಮಾಜಿಕ ಹೊಣೆಗಾರಿಕೆ ( SOCIAL RESPONSIBILITY ) ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಗರ ಹಾಗೂ ಗ್ರಾಮೀಣ ಭಾಗದ ಪದವೀಧರ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಗೊಳಿಸಿ,ಸಾಮಾಜಿಕ ಪ್ರಗತಿ ಸಾಧಿಸಬೇಕೆಂಬುದು ಸಂಸ್ಥೆಯ ಸದಾಶಯವಾಗಿದೆ.
ನರೇನ್ ಅಕಾಡೆಮಿಯು “ನೋ ಲಾಸ್ ನೋ ಪ್ರಾಫಿಟ್” (ಲಾಭರಹಿತ) ಸಂಸ್ಥೆಯಾಗಿದೆ. ಆ ಪ್ರಯುಕ್ತ ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುನ್ನತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ಆಯೋಜಿಸುತ್ತದೆ. ಇದರ ಸಂಪೂರ್ಣ ಪ್ರಯೋಜನವನ್ನು ಪದವೀಧರ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ( BA, BCOM, BSC, BBM, BCA) ಅಥವಾ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದಿರುವ ಯಾವುದೇ ಪದವೀಧರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
Chandrakanth V
